‘ರೂಪ’ ಹಾಡಿನ ಧ್ವನಿಮುದ್ರಣ
Posted date: 29 Thu, Sep 2016 – 11:51:02 AM

ರೋಜರ‍್ಸ್ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ, ನೆಲ್ಸನ್ ರಾಜನ್ ಸ್ವತಃ ಕಥೆ ಬರೆದು ನಿರ್ಮಿಸುತ್ತಿರುವ, ‘ರೂಪ’ ಚಿತ್ರಕ್ಕೆ ರೋಜರ‍್ಸ್ ಪ್ರೊಡಕ್ಷನ್ ಹೌಸ್‌ನಲ್ಲಿ ಗಾಯಕಿ ಚೈತ್ರ ಹಾಡಿದ ‘ಲೋಕ ಸುತ್ತುತ್ತೆ, ಮಂತ್ರ ತಂತ್ರಾನ ನನ್ನ ತಲೆ ಗಿರ್ರಂತಾ ಸುತ್ತುತ್ತಾ ನಿಶಾದಿಂದ... ಜೀವನ ಒಂದು ಹೋರಾಟ ಅದನ್ನ ಜಯಿಸಬೇಕು...’ ಎಂಬ ಹಾಡಿನ ಧ್ವನಿ ಮುದ್ರಣ ನಡೆಯಿತು.
ಈ ಚಿತ್ರದ ಚಿತ್ರಕತೆ, ಸಂಭಾಷಣೆ, ನಿರ್ದೇಶನ ಆಂಟೋನಿ ಕಮಲ್, ಛಾಯಾಗ್ರಹಣ ಪವನ್ ಕುಮಾರ್, ಸಂಕಲನ ಗೋಪಿನಾಥ್, ಸಂಗೀತ ಮ್ಯಾಥ್ಯೂ, ಸಹ ನಿರ್ದೇಶನ ಜಯ ಮಲ್ಲಿಕಾರ್ಜುನ, ಕಲೆ ಪ್ರಕಾಶ್, ನೃತ್ಯ ಡಾಮನಿಕ್, ನಿರ್ವಹಣೆ ಸುಂದರಂ.
ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದಲ್ಲಿ ಶೋಭರಾಜ್, ರೇಖಾ ವಿ ಕುಮಾರ್, ಮಮತಾ ರಾಹುತ್, ಜೆಪಿ, ಆಂಟೋನಿ ಕಮಲ್, ಸುನೀಲ್, ಚಂದನ್, ಡಾಮನಿಕ್, ವೆಂಕಟೇಶ್ ಮುಂತಾದವರ ತಾರಾಗಣವಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed